ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಯುವತಿ : ತಂದೆಯಂದಿರು ಮಾತ್ರ ಬೇರೆ ಬೇರೆ

khushihost
ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಯುವತಿ : ತಂದೆಯಂದಿರು ಮಾತ್ರ ಬೇರೆ ಬೇರೆ

ಬ್ರೆಜಿಲ್​: ಬ್ರೆಜಿಲ್​ನಲ್ಲಿ 19 ವರ್ಷದ ಯುವತಿಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ, ಆದರೆ ಅಚ್ಚರಿಯ ವಿಷಯ ಎಂದರೆ ಈಕೆಯ ಅವಳಿ ಮಕ್ಕಳ ತಂದೆಯಂದಿರು ಮಾತ್ರ ಬೇರೆ ಬೇರೆ

ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಋತುಚಕ್ರ ಮುಗಿದ ಕೆಲವೇ ದಿನಗಳಲ್ಲಿ ಒಂದೇ ದಿನ ಇಬ್ಬರು ವ್ಯಕ್ತಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾರಣ ಈ ರೀತಿ ಘಟನೆ ಸಂಭವಿಸಿದೆ ಎಂದಿದ್ದಾರೆ.
ಇಂಥ ಕ್ರಿಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಹೆಟೆರೊಪಟರ್ನಲ್ ಸೂಪರ್ಫೆಕಂಡೇಶನ್  ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಇಲ್ಲಿಯವರೆಗೆ 20 ಮಂದಿಯಲ್ಲಿ ಈ ರೀತಿಯ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.
ಮಕ್ಕಳು ಹುಟ್ಟಿದಾಗ ಈ ವಿಷಯ ತಿಳಿದಿರಲಿಲ್ಲ. ಅವರ ಮೊದಲ ಹುಟ್ಟುಹಬ್ಬದ ಸಮಯದಲ್ಲಿ ತಾಯಿಗೆ ಈ ಮಕ್ಕಳ ತಂದೆ ಯಾರು ಎಂದು ನೋಡುವ ಹಂಬಲವಾಗಿದೆ. ಆದ್ದರಿಂದ ಡಿಎನ್​ಎ ಪರೀಕ್ಷೆ ಮಾಡಲಾಗಿದೆ. ಆದರೆ ವೈದ್ಯರಿಗೇ ಅಚ್ಚರಿ ಎನ್ನುವಂತೆ ಇಬ್ಬರು ಮಕ್ಕಳ ಡಿಎನ್​ಎ ಪರೀಕ್ಷೆ ಬೇರೆ ಬೇರೆ ರೀತಿ ಬಂದಿದೆ.

ನಂತರ ವೈದ್ಯರು ಯುವತಿಯ ಬಳಿ ಚರ್ಚಿಸಿದಾಗ ತಾನು ಒಂದೇ ದಿನ ಇಬ್ಬರ ಜತೆ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ತಿಳಿಸಿದ್ದಾಳೆ. ಈ ಸುದ್ದಿ ಇದೀಗ ಭಾರಿ ವೈರಲ್​ ಆಗಿದೆ.

Share This Article