ಅಪ್ರಾಪ್ತೆ ಜೊತೆ ಸೋದರ ಮಾವನ ಮಗನ ದೈಹಿಕ ಸಂಪರ್ಕ : ಪೋಕ್ಸೋ ಪ್ರಕರಣ ದಾಖಲು 

khushihost
ಅಪ್ರಾಪ್ತೆ ಜೊತೆ ಸೋದರ ಮಾವನ ಮಗನ ದೈಹಿಕ ಸಂಪರ್ಕ : ಪೋಕ್ಸೋ ಪ್ರಕರಣ ದಾಖಲು 

ಹುಬ್ಬಳ್ಳಿ: 14 ವರ್ಷದ ಬಾಲಕಿ ಜೊತೆ ದೈಹಿಕ ಸಂಪರ್ಕ ನಡೆಸಿ, ಗರ್ಭಿಣಿ ಆಗಲು ಕಾರಣವಾದ ಯುವಕನ ವಿರುದ್ಧ ಇಲ್ಲಿನ ಕೇಶ್ವಾಪುರ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕಳೆದ 15 ದಿನಗಳಿಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಅವಳನ್ನು ತಾಯಿಯು ಚಿಕಿತ್ಸೆಗೆ ಎಂದು ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ಬಾಲಕಿ ಗರ್ಭಿಣಿ ಆಗಿರುವುದು ಗೊತ್ತಾಗಿದೆ.

ಬಾಲಕಿಯ ತಾಯಿಯು ಪೊಲೀಸರಿಗೆ ದೂರು ನೀಡಿದ್ದಾರೆ. ತನ್ನ ಅಣ್ಣನ ಮಗನೇ ಆಗಾಗ ಮನೆಗೆ ಬರುತ್ತಿದ್ದ. ಯಾರೂ ಇಲ್ಲದಾಗ ಆತ ನನ್ನ ಮಗಳನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕೇಶ್ವಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article