ಬೀದಿ ಬೀದಿಯಲ್ಲಿ ಬಿಜೆಪಿ ಮಾನ ತೆಗಿತೀನಿ : ಪ್ರಮೋದ ಮುತಾಲಿಕ

khushihost
ಬೀದಿ ಬೀದಿಯಲ್ಲಿ ಬಿಜೆಪಿ ಮಾನ ತೆಗಿತೀನಿ : ಪ್ರಮೋದ ಮುತಾಲಿಕ

ಉಡುಪಿ : ಬೀದಿಯಲ್ಲಿ ಬೀದಿಯಲ್ಲಿ ಬಿಜೆಪಿ ಸರ್ಕಾರದ ಮಾನ ಮರ್ಯಾದೆ ತೆಗಿತೀನಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆ ಗಂಗೊಳ್ಳಿಯಲ್ಲಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಶಕ್ತಿ ಸೇರುವ ಜಾಗಕ್ಕೆ ತಡೆದು ದ್ರೋಹ ಮಾಡ್ತಿದ್ದೀರಿ. ಇದು ಸಂವಿಧಾನ ವಿರೋಧಿ ನಡೆ, ಕಾಂಗ್ರೆಸ್​ ಅವಧಿಯಲ್ಲಿ ನಿಷೇಧಿಸಿದಾಗ ನೀವು ವಿರೋಧ ಮಾಡಿದ್ದೀರಿ ಎಂದು ಪ್ರಮೋದ ಮುತಾಲಿಕ ಕಿಡಿಕಾರಿದ್ದಾರೆ.

ಕಲಬುರಗಿ ಗಣೇಶೋತ್ಸವಕ್ಕೆ ತಮಗೆ ಪ್ರವೇಶ ನಿಷೇಧ ವಿಧಿಸಿರುವ ವಿಚಾರವಾಗಿ ಪ್ರಮೋದ ಮುತಾಲಿಕ ಬಿಜೆಪಿ ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ.

Share This Article