ದಾಂಡೇಲಿ ರೆಸಾರ್ಟ‌ನಲ್ಲಿ ಕುಣಿತ, ವೇಶ್ಯಾವಾಟಿಕೆ : 8 ಯುವತಿಯರ ರಕ್ಷಣೆ

khushihost
ದಾಂಡೇಲಿ ರೆಸಾರ್ಟ‌ನಲ್ಲಿ ಕುಣಿತ, ವೇಶ್ಯಾವಾಟಿಕೆ : 8 ಯುವತಿಯರ ರಕ್ಷಣೆ

ದಾಂಡೇಲಿ: ಡಾನ್ಸ ಮತ್ತು ವೇಶ್ಯಾವಾಟಿಕೆ ನಡೆಸಲು ಅಡ್ಡೆ ಮಾಡಿಕೊಂಡಿದ್ದ ರೆಸಾರ್ಟ ಮೇಲೆ ಪೊಲೀಸರು ದಾಳಿ ಮಾಡಿ, ಆಂಧ್ರಪ್ರದೇಶ ಮೂಲದ 8 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ನವೆಂಬರ 14 ರಂದು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ದಾಂಡೇಲಿಯ ಹರೇಗಾಳಿ ಗ್ರಾಮದ ಬರ್ಚಿ ಕ್ರಾಸ್ ಬಳಿಯ ರೆಸಾರ್ಟವೊಂದರ ಮೇಲೆ ದಾಳಿ ನಡೆಸಿದ್ದರು. ಆಂಧ್ರಪ್ರದೇಶದಿಂದ ಹುಡುಗಿಯರನ್ನು ಕರೆ ತಂದ ಚಾಲಕ ಕಮ್ ಏಜೆಂಟ್ ಮತ್ತು ರೆಸಾರ್ಟ್‌ನ ಮ್ಯಾನೇಜರ್‌ನನ್ನು ಬಂಧಿಸಲಾಗಿದೆ.

ರೆಸಾರ್ಟ‌ನಲ್ಲಿದ್ದ ವ್ಯಕ್ತಿಯೊಬ್ಬರು ದೊಡ್ಡ ಪಾರ್ಟಿ ಆಯೋಜಿಸಿದ್ದರಿಂದ ಎಂಟು ಹುಡುಗಿಯರನ್ನು ನೃತ್ಯ ಮಾಡಲು ಕಳುಹಿಸಿ ಕೊಡುವಂತೆ ಕೇಳಿದ್ದರು. ಅದರಂತೆ ಹುಡುಗಿಯರನ್ನು ಕರೆತರಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ರೆಸಾರ್ಟ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಲಾಗಿದೆ.

Share This Article