೨೫ ಕೋಟಿ ರೂ. ಚಿಟ್ ಫಂಡ್ ವಂಚನೆ ಆರೋಪ : ಖಾಸಗಿ ಫೈನಾನ್ಸಗಳ ವಿರುದ್ಧ ಪ್ರತಿಭಟನೆ 

khushihost
೨೫ ಕೋಟಿ ರೂ. ಚಿಟ್ ಫಂಡ್ ವಂಚನೆ ಆರೋಪ : ಖಾಸಗಿ ಫೈನಾನ್ಸಗಳ ವಿರುದ್ಧ ಪ್ರತಿಭಟನೆ 

ಗೋಕಾಕ: ಖಾಸಗಿ ಫೈನಾನ್ಸ್ ವಿರುದ್ಧ 25 ಕೋಟಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಸಂತ್ರಸ್ತರು ಫೈನಾನ್ಸ ಮತ್ತು ಆಡಳಿತ ಮಂಡಳಿ ಸದಸ್ಯರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ನಡೆದಿದೆ.

ಘಟಪ್ರಭಾ ಪಟ್ಟಣದಲ್ಲಿರುವ ನವೋದಯ ಫೈನಾನ್ಸ, ಜಗಜ್ಯೋತಿ ಸೌಹಾರ್ದ ಸಹಕಾರಿ ಸಂಘವು ಸರ್ವಜ್ಞ ಚಿಟ್ ಹೆಸರಿನಲ್ಲಿ ಅಂದಾಜು 25 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದೆ ಎಂದು ಆರೋಪಿಸಿ ವಂಚನೆಗೊಳಗಾದವರು ಫೈನಾನ್ಸ್​​ನ ಆಡಳಿತ ಮಂಡಳಿ ಮತ್ತು ಸದಸ್ಯರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮನೆಯ ಮುಂದೆ ಬೊಬ್ಬೆಹಾಕಿ, ತಮಟೆ, ಪಾತ್ರೆಗಳನ್ನು ಬಾರಿಸಿ ಪ್ರತಿಭಟನೆ ನಡೆಸಿದ ಜನರು, ನಮ್ಮ ದುಡಿದ ಹಣ ವಾಪಸ್ ಕೊಡಿ ಎಂದು ಘೋಷಣೆ ಕೂಗಿದರು.

Share This Article