ಕೊಲೆಯಾದ ಫಾಜಿಲ್, ಮಸೂದ ಬಗ್ಗೆ ಸರಕಾರದ ತಾರತಮ್ಯದ ಆರೋಪ; ಪ್ರತಿಭಟನೆ

khushihost
ಕೊಲೆಯಾದ ಫಾಜಿಲ್, ಮಸೂದ ಬಗ್ಗೆ ಸರಕಾರದ ತಾರತಮ್ಯದ ಆರೋಪ; ಪ್ರತಿಭಟನೆ

ಮಂಗಳೂರು: ಫಾಜಿಲ್ ಮತ್ತು ಮಸೂದ ಹತ್ಯೆ ಪ್ರಕರಣದ ತನಿಖೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಮುಸ್ಲಿಂ ಐಕ್ಯತಾ ವೇದಿಕೆ ಪ್ರತಿಭಟನೆ ನಡೆಸಿತು.

ಮಂಗಳೂರು ಕ್ಲಾಕ್ ಟವರ್ ಬಳಿ ಮುಸ್ಲಿಂ ಐಕ್ಯತಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರವೀಣ ನೆಟ್ಟಾರು ಹತ್ಯೆಯಾದಾಗ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 25 ಲಕ್ಷ ಪರಿಹಾರ ನೀಡಿತ್ತು.

ಆದರೆ ಕೊಲೆಯಾದ ಮುಸ್ಲಿಂ ಸಮುದಾಯದ ಮಸೂದ ಮತ್ತು ಫಾಜಿಲ್ ಕುಟುಂಬಗಳಿಗೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ. ಈ ಇಬ್ಬರ ನಿವಾಸಕ್ಕೆ ಜಿಲ್ಲಾಧಿಕಾರಿಯೂ ಭೇಟಿ ನೀಡಿಲ್ಲ. ಮಸೂದ ಫಾಜಿಲ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ ಎಂದು ಆರೋಪಿಸಿದರು.

ಈ ಮೂಲಕ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂ ಐಕ್ಯತಾ ವೇದಿಕೆ ಪ್ರತಿಭಟನೆ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

Share This Article