ಹೃದಯಾಘಾತದಿಂದ ಗೋಕಾಕ ಅಪರಾಧ ವಿಭಾಗದ ಪಿಎಸ್ಐ ಸಾವು

khushihost
ಹೃದಯಾಘಾತದಿಂದ ಗೋಕಾಕ ಅಪರಾಧ ವಿಭಾಗದ ಪಿಎಸ್ಐ ಸಾವು

ಗೋಕಾಕ: ಗೋಕಾಕ ಗ್ರಾಮೀಣ ಅಪರಾಧ ವಿಭಾಗದ ಪಿಎಸ್ಐ ಫಕೀರಪ್ಪಾ ತಳವಾರ ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.

ಕಳೆದ ಇಪ್ಪತ್ತು ದಿನಗಳ ಹಿಂದಷ್ಟೇ ಗೋಕಾಕ ಗ್ರಾಮೀಣ ಠಾಣೆಗೆ ಅಪರಾಧ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದರು. ಫಕೀರಪ್ಪಾ ತಳವಾರ ಮೂಲತಃ ಬೀಳಗಿ ತಾಲೂಕು ಶಿರಗುಪ್ಪಿ ಗ್ರಾಮದವರಾಗಿದ್ದಾರೆ.

ಫಕೀರಪ್ಪ ಅವರಿಗೆ ಪೊಲೀಸರು ಸಾಕಷ್ಟು ಸಲ ಫೋನ್ ಮಾಡಿದ್ದಾರೆ. ಆದರೆ ಅವರು ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂದೇಹ ಬಂದು ಅವರ ಕೊಠಡಿ ಪರಿಶೀಲನೆ ನಡೆಸಿದಾಗ ನಿಧನರಾಗಿರುವುದು ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಲೇ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು.

Share This Article