ಎಲ್ ಪಿಜಿ ಸಿಲಿಂಡರಗಳ ಮೇಲೆ ಕ್ಯೂಆರ್ ಕೋಡ್ 

khushihost
ಎಲ್ ಪಿಜಿ ಸಿಲಿಂಡರಗಳ ಮೇಲೆ ಕ್ಯೂಆರ್ ಕೋಡ್ 

ಹೊಸದಿಲ್ಲಿ : ದೇಶೀಯ ಸಿಲಿಂಡರ್ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ ಪಿಜಿ ಸಿಲಿಂಡರಗಳು ಶೀಘ್ರದಲ್ಲೇ ಕ್ಯೂಆರ್ ಕೋಡ್ ಗಳೊಂದಿಗೆ ಬರಲಿವೆ. ಟ್ರ್ಯಾಕಿಂಗ್ ಮತ್ತು ಟ್ರೇಸ್ ಉಪಕ್ರಮವು ಸಿಲಿಂಡರ್ ಕಳವನ್ನು ತಡೆಯಲು ನೆರವಾಗಲಿದೆ. ಜೊತೆಗೆ ಸಿಲಿಂಡರ್‌ಗಳ ಉತ್ತಮ ದಾಸ್ತಾನು ನಿರ್ವಹಣೆಯನ್ನು ಪತ್ತೆಹಚ್ಚಲು ಮತ್ತು ಖಚಿತಪಡಿಸಿಕೊಳ್ಳಲು ಕೂಡ ಅನುಕೂಲ ಮಾಡಿಕೊಡಲಿದೆ ಎನ್ನಲಾಗಿದೆ.

ಕ್ಯೂಆರ್ ಕೋಡ್ ಅನ್ನು ಅಸ್ತಿತ್ವದಲ್ಲಿರುವ ಸಿಲಿಂಡರ್‌ಗಳಲ್ಲಿ ಅಂಟಿಸಲಾಗುವುದು ಮತ್ತು ಹೊಸದಕ್ಕೆ ಕೂಡ ಬೆಸುಗೆ ಹಾಕಲಾಗುತ್ತದೆ. ಕ್ಯೂಆರ್ ಕೋಡ್ ಸಕ್ರಿಯಗೊಳಿಸಿದಾಗ ಇದು ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್ ಮತ್ತು ಟ್ರೇಸಿಂಗ್ ದಾಸ್ತಾನು ನಿರ್ವಹಣೆ ಹೀಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಲಿದೆ ಎಂದು ಕೇಂದ್ರ ಸಚಿವ ಹರ್ದೀಪ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

Share This Article