ರಾಮ‌ದೇವ‌ ಬಾಬಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ ನೇಪಾಳ ಸರಕಾರ

khushihost
ರಾಮ‌ದೇವ‌ ಬಾಬಾ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದ ನೇಪಾಳ ಸರಕಾರ

ಕಾಠಮಾಂಡು: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಔಷಧ ಉತ್ಪಾದನೆಯ ಮಾನದಂಡಗಳನ್ನು ಪಾಲಿಸದ ಭಾರತದ 16 ಫಾರ್ಮಾ‌ ಕಂಪನಿಗಳನ್ನು ನೇಪಾಳ ಸರಕಾರ “ಕಪ್ಪು ಪಟ್ಟಿಗೆ’ ಸೇರಿಸಿದೆ.

ಬಾಬಾ ರಾಮ‌ದೇವ‌ ಅವರ ಪತಂಜಲಿ ಉತ್ಪನ್ನಗಳನ್ನು ತಯಾರು ಮಾಡುವ “ದಿವ್ಯ ಫಾರ್ಮಸಿ’ ಕೂಡ ಇವುಗಳಲ್ಲಿ ಸೇರಿದೆ. ಈ ಕಂಪೆನಿಗಳ ಔಷಧಗಳನ್ನು ಪೂರೈಕೆ ಮಾಡುವ ನೇಪಾಳದ ಸ್ಥಳೀಯ ಎಜೆಂಟರು‌ಗಳಿಗೆ ಡಿ.18ರಂದೇ ಸುತ್ತೋಲೆ ಕಳುಹಿಸಿದೆ. ಕೂಡಲೇ ಆ ಔಷಧಗಳನ್ನು ವಾಪಸ್‌ ಪಡೆಯಿರಿ ಎಂದೂ ನೇಪಾಳ ಸರಕಾರ ಸೂಚಿಸಿದೆ.

ಇನ್ನು ಮುಂದೆ ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗಳ ಔಷಧಗಳನ್ನು ಆಮದು ಮಾಡಿಕೊಳ್ಳದಂತೆಯೂ ಸರಕಾರ ಆದೇಶಿಸಿದೆ.

Share This Article