ಗುಜರಾತ್ ಬಿಜೆಪಿಯಲ್ಲಿ ಬಂಡಾಯ ; ಮತ್ತೆ 12 ಮುಖಂಡರು ಸಸ್ಪೆಂಡ್

khushihost
ಗುಜರಾತ್ ಬಿಜೆಪಿಯಲ್ಲಿ ಬಂಡಾಯ ; ಮತ್ತೆ 12 ಮುಖಂಡರು ಸಸ್ಪೆಂಡ್

ಅಹಮದಾಬಾದ, ೨೩- ಗುಜರಾತ್ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತ್ತೆ ಅಧಿಕಾರ ಗಳಿಸಲು ಆಡಳಿತರೂಢ ಬಿಜೆಪಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದೆ. ಇದರ ಮಧ್ಯೆ ಬಂಡಾಯ ಅಭ್ಯರ್ಥಿಗಳ ತಲೆನೋವು ಪಕ್ಷದ ನಾಯಕರನ್ನು ಕಾಡುತ್ತಿದ್ದು, ಪಕ್ಷೇತರರಾಗಿ ಕಣಕ್ಕಿಳಿದಿರುವ 12 ಮಂದಿಯನ್ನು ಈಗ ಸಸ್ಪೆಂಡ್ ಮಾಡಲಾಗಿದೆ. ಇವರುಗಳ ಪೈಕಿ 6 ಬಾರಿ ಆಯ್ಕೆಯಾಗಿರುವ ಶಾಸಕರುಗಳು ಸಹ ಇದ್ದಾರೆ.

ಈ ಮೊದಲು ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಏಳು ಮಂದಿ ಬಂಡಾಯ ಬಿಜೆಪಿ ಮುಖಂಡರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಎರಡನೇ ಹಂತದ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿರುವ 12 ಮಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

Share This Article