ದ್ವಿಚಕ್ರ ವಾಹನಗಳ ನಡುವೆ ಅಪಘಾತ : ನಿವೃತ್ತ ಸೈನಿಕ ಸಾವು 

khushihost
ದ್ವಿಚಕ್ರ ವಾಹನಗಳ ನಡುವೆ ಅಪಘಾತ : ನಿವೃತ್ತ ಸೈನಿಕ ಸಾವು 

ಚಿಕ್ಕೋಡಿ : ಎರಡು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಿವೃತ್ತ ಸೈನಿಕರೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಮತ್ತು ಇಬ್ಬರು ಗಾಯಗೊಂಡ ಘಟನೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಘಟ್ಟಿ ಬಸವೇಶ್ವರ ದೇವಸ್ಥಾನದ ಹತ್ತಿರ ನಡೆದಿದೆ.

ಮಲಗೌಡ ಬಸಗೌಡ ಪಾಟೀಲ ಮೃತ ನಿವೃತ್ತ ಸೈನಿಕರು. ಅವರು ಮೂಲತಃ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದವರು. ಬಸಗೌಡ ಪಾಟೀಲ ಅವರು ತಮ್ಮ ಸಂಬಂಧಿಕರಾದ ಲಕ್ಷ್ಮೀ ಪಾಟೀಲ ಅವರೊಂದಿಗೆ ದ್ವಿಚಕ್ರ ವಾಹನದ ಮೇಲೆ ಮುಗಳಿಯಿಂದ ಚಿಕ್ಕೋಡಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ಚಿಕ್ಕೋಡಿಯಿಂದ ಕರೋಶಿ ಗ್ರಾಮಕ್ಕೆ ಬರುತ್ತಿದ್ದ ಗಂಗಾಧರ ಕೋಟೆಯವರ ವಾಹನದೊಂದಿಗೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕುಳಿತಿದ್ದ ಲಕ್ಷ್ಮಿ ಪಾಟೀಲ ಹಾಗೂ ಗಂಗಾಧರ ಕೋಟೆ ಎಂಬುವರಿಗೆ ಗಾಯಗಳಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಿಸಲಾಗಿದೆ. ಚಿಕ್ಕೋಡಿ ಸಂಚಾರಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article