ಸುಳ್ಳಿನ ವಿಶ್ವವಿದ್ಯಾಲಯದ ಕುಲಪತಿ ಸೂಲಿಬೆಲೆಯೊಂದಿಗೆ ಚರ್ಚೆಯ ಅವಶ್ಯಕತೆ ಇಲ್ಲ : ಸತೀಶ ಜಾರಕಿಹೊಳಿ

khushihost
ಸುಳ್ಳಿನ ವಿಶ್ವವಿದ್ಯಾಲಯದ ಕುಲಪತಿ ಸೂಲಿಬೆಲೆಯೊಂದಿಗೆ ಚರ್ಚೆಯ ಅವಶ್ಯಕತೆ ಇಲ್ಲ : ಸತೀಶ ಜಾರಕಿಹೊಳಿ

ಬೆಳಗಾವಿ: ಹಿಂದು ಪದದ ಕುರಿತು ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಚಕ್ರವರ್ತಿ ಸೂಲಿಬೆಲೆ ಬೆಳಗಾವಿಯ ಯಮಕನಮರಡಿಯಲ್ಲಿ ಬಹಿರಂಗ ಸವಾಲು ಹಾಕಿದ್ದರು. ಈಗ ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಓಪನ್ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ ನಾವು ಸೂಲಿಬೆಲೆಯ 10 ವರ್ಷಗಳ ಹೇಳಿಕೆಗಳ ಪರಶೀಲನೆ ಮಾಡುತ್ತಿದ್ದೇವೆ. ಅವರು ಹೇಳಿದ್ದು ಇದುವರೆಗೆ ಏನಾದರೂ ನಿಜ ಆಗಿದೆಯಾ ಎನ್ನುವುದನ್ನು ನೋಡುತ್ತಿದ್ದೇವೆ. ಸೂಲಿಬೆಲೆ ಹೇಳಿದ್ದ ಚಿನ್ನದ ರಸ್ತೆ ಎಲ್ಲಿದೆ ಎಂದು ಹುಡುಕುತ್ತಿದ್ದೇವೆ ಎಂದಿದ್ದಾರೆ.

ಬೆಳಿಗ್ಗೆ ಬೆಂಗಳೂರಿಂದ ಮಂಗಳೂರಿಗೆ ಹೋಗಿ ಸಂಜೆ ಮತ್ತೆ ಬೆಂಗಳೂರು ಊಟಕ್ಕೆ ಬರಬೇಕು. ಅಂಥ ರಸ್ತೆ ಇದೆ ಅನ್ನುತ್ತಾರೆ. ಆ ರಸ್ತೆ ಎಲ್ಲಿದೆ ಹುಡುಕುತ್ತಿದ್ದೇವೆ, ಸೂಲಿಬೆಲೆ ಸುಳ್ಳು ವಿಶ್ವವಿದ್ಯಾಲಯದ ಕುಲಪತಿ ಎಂದು ಕಾಲೆಳೆದಿದ್ದಾರೆ.

ಅವನು ಹೇಳಿದ್ದರಲ್ಲಿ ಒಂದಾದರೂ ಸತ್ಯವಾಗಿದ್ದರೆ ನಾವು ಅವರ ಜೊತೆ ಚರ್ಚೆ ಮಾಡುತ್ತೇವೆ. ಇಂತಹ ವ್ಯಕ್ತಿಯ ಜೊತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಕಾರ್ಯಕರ್ತರ ಹಾಗೂ ನನ್ನ ಅಭಿಪ್ರಾಯವಾಗಿದೆ ಎಂದು ಸತೀಶ ಹೇಳಿದ್ದಾರೆ.

ಅದರಂತೆ ಶಾಸಕ ಯತ್ನಾಳ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ಬೇಕಾದರೆ ಒಂದು ಪ್ರತ್ಯೇಕ ವೇದಿಕೆ ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ಗೋಕಾಕ ​ಅನ್ನು ಬಿಹಾರ ಅಂತ ಮೊದಲಿನಿಂದ ಹೇಳುತ್ತಿದ್ದಾರೆ. ಅದಕ್ಕೆ ಗೋಕಾಕ ಜನರೇ ಉತ್ತರ ನೀಡುತ್ತಾರೆ. ಯತ್ನಾಳಗೆ ವಿಜಯಪುರಕ್ಕೆ ಹೋಗಿ ಬೈಯಬೇಕಿಲ್ಲ, ಎಲ್ಲಿ ಬೈದರೂ ಹೋಗಿ ಮುಟ್ಟುತ್ತದೆ. ಮುಟ್ಟಿಸುವ ಕೆಲಸ ನಾವು ಮಾಡುತ್ತೇವೆ ಎಂದು ಸತೀಶ​ ಜಾರಕಿಹೊಳಿ ಹೇಳಿದ್ದಾರೆ.

Share This Article