ದರ್ಶನ್‌ ಮೇಲೆ ದುಷ್ಕರ್ಮಿಗಳಿಂದ ಚಪ್ಪಲಿ ಎಸೆತ; ಶಿವರಾಜ ಕುಮಾರ ಖಂಡನೆ

khushihost
ದರ್ಶನ್‌ ಮೇಲೆ ದುಷ್ಕರ್ಮಿಗಳಿಂದ ಚಪ್ಪಲಿ ಎಸೆತ; ಶಿವರಾಜ ಕುಮಾರ ಖಂಡನೆ

ಬೆಂಗಳೂರು: ಹೊಸಪೇಟೆಯಲ್ಲಿ ʼಕ್ರಾಂತಿʼ ಸಿನಿಮಾದ ಆಡಿಯೋ ಬಿಡುಗಡೆ ವೇಳೆ ಕನ್ನಡ ಚಿತ್ರರಂಗದ ದಿಗ್ಗಜ ನಟ ದರ್ಶನ್‌ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಖ್ಯಾತ ಹಿರಿಯ ನಟ ಶಿವರಾಜ ಕುಮಾರ ಅವರು ತೀವ್ರವಾಗಿ ಖಂಡಿಸಿದ್ದಾರೆ.

ನಿನ್ನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕುಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿಸಿ ದ್ವೇಷ ಅಗೌರವವನ್ನಲ್ಲ ಎಂದಿದ್ದಾರೆ.

ಹೊಸಪೇಟೆಯಲ್ಲಿ  ಕ್ರಾಂತಿ ಸಿನಿಮಾದ ಆಡಿಯೋ ರಿಲೀಸ್‌ ವೇಳೆ ದರ್ಶನ್‌ ಅವರ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿದ್ದಾರೆ. ತರಾತುರಿಯಲ್ಲಿ ಚಿತ್ರ ತಂಡ ಆಡಿಯೋ ಬಿಡುಗಡೆ ಮಾಡಿದೆ. ಕೆಲ ಉದ್ರಿಕ್ತರು ಕಲ್ಲು ತೂರಾಟ ಸಹ ನಡೆಸಿದ್ದಾರೆ. ಆಗ ಪೊಲೀಸರು ಲಾಠಿ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Share This Article