ಮನುಷ್ಯನ ಕತ್ತರಿಸಿದ ತಲೆ ಕಚ್ಚಿಕೊಂಡು ಬೀದಿಯಲ್ಲಿ ಓಡಿದ ನಾಯಿಯ ಬೆಚ್ಚಿಬೀಳಿಸುವ ವಿಡಿಯೋ

khushihost
ಮನುಷ್ಯನ ಕತ್ತರಿಸಿದ ತಲೆ ಕಚ್ಚಿಕೊಂಡು ಬೀದಿಯಲ್ಲಿ ಓಡಿದ ನಾಯಿಯ ಬೆಚ್ಚಿಬೀಳಿಸುವ ವಿಡಿಯೋ

ಮೆಕ್ಸಿಕೋ, ೩- ನಾಯಿಯೊಂದು ಮನುಷ್ಯನ ರುಂಡವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿದೆ. ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಶ್ವಾನ ಮನುಷ್ಯರೊಂದಿಗೆ ಸುಲಭವಾಗಿ ಬೆರೆಯುವ ಸ್ನೇಹ ಜೀವಿ. ಎಷ್ಟೋ ಜನರಂತೂ ಮನೆಯ ಸದಸ್ಯರಂತೆ ಅದನ್ನು ಸಾಕುತ್ತಾರೆ. ಆದರೆ ಈಗ ಈ ದೃಶ್ಯ ನೋಡಿದ್ಮೇಲೆ ಈ ಶ್ವಾನಗಳಿಂದ ದೂರ ಇದ್ದರೆ ಸಾಕು ಅನ್ನಿಸಿಬಿಡುತ್ತೆ. ಅಷ್ಟಕ್ಕೂ ಈ ಭಯಂಕರ ದೃಶ್ಯ ಕಂಡು ಬಂದಿದ್ದು ಮೆಕ್ಸಿಕೋದಲ್ಲಿ.

ಮೆಕ್ಸಿಕೋ ಪಟ್ಟಣದ ನಿವಾಸಿಗಳು ಝಕಾಟೆಕಾಸ್‌ನ ಬೀದಿಯಲ್ಲಿ ನಾಯಿಯೊಂದು ಮಾನವ ತಲೆಯನ್ನು ಬಾಯಿಯಲ್ಲಿ ಹಿಡಿದುಕೊಂಡು ಓಡುತ್ತಿರುವುದನ್ನು ಕಂಡಿದ್ದಾರೆ. ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈಗ ಪೊಲೀಸರು ನಾಯಿಯನ್ನ ಪತ್ತೆ ಮಾಡಿ, ನಾಯಿ ಕಚ್ಚಿರುವ ರುಂಡ ಯಾರದ್ದು, ಅದು ಎಲ್ಲಿಂದ ತಂದಿದೆ ಅನ್ನುವುದರ ಕುರಿತು ತನಿಖೆ ಆರಂಭಿಸಿದೆ.

ಮೆಕ್ಸಿಕೋದ ಹಿಂಸಾಚಾರ ಪೀಡಿತ ಝಕಾಟೆಕಾಸ್‌ನಲ್ಲಿ ಈ ದೃಶ್ಯ ಕಣ್ಣಿಗೆ ಬಿದ್ದಿದೆ. ಅಲ್ಲಿಂದಾನೇ ಪ್ರಯಾಣ ಮಾಡುತ್ತಿದ್ದ ಕಾರು ಚಾಲಕನಿಗೆ ಈ ದೃಶ್ಯ ಕಾಣಿಸಿದಾಕ್ಷಣ ಮೊಬೈಲ್‌‌ನಲ್ಲಿ ಸೆರೆ ಹಿಡಿದಿದ್ದಾರೆ. ನಾಯಿ ಅಪರಾಧದ ಸ್ಥಳದಿಂದ ಮಾನವ ತಲೆಯನ್ನು ಬಾಯಿಯಲ್ಲಿ ಹಿಡಿದುಕೊಂಡು ಅದನ್ನು ತಿನ್ನಲು ಎಲ್ಲೋ ತೆಗೆದುಕೊಂಡು ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ಪೊಲೀಸರು ಅಪರಾಧದ ಸ್ಥಳ ತಲುಪುವ ವೇಳೆಗೆ ನಾಯಿ ಮಾನವ ತಲೆಯನ್ನು ಹಿಡಿದು ಓಡಿಹೋಯಿತು ಎಂದು ಮೆಕ್ಸಿಕನ್ ಪತ್ರಿಕೆ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ದಿ ಹ್ಯೂಮೊನ್ ಗ್ರಿನ್ಡ್ ಅನ್ನೊ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ‘ಮಾನವನ ರುಂಡ ಬಾಯಲ್ಲಿ ಹಿಡಿದು ಬೀದಿಯಲ್ಲಿ ಓಡುತ್ತಿರುವ ನಾಯಿ‘ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. 12.8 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನ ವೀಕ್ಷಿಸಿದ್ದಾರೆ. ಇನ್ನೂ ಕಾಮೆಂಟ್ ಬಾಕ್ಸ್‌ನಲ್ಲಿ ರಾಶಿ-ರಾಶಿ ಕಾಮೆಂಟ್ ಹಾಕಿದ್ದಾರೆ.

‘2002ರಲ್ಲಿ ನಾನು ಕೊನೆಯ ಬಾರಿಗೆ ಮೆಕ್ಸಿಕೋಗೆ ಹೋಗಿದ್ದೆ. ಇದು ಭೂಮಿಯ ಮೇಲಿನ ನರಕ. ಒಮ್ಮೆ ಟಿಜುವಾನಾಗೆ ಹೋಗಿದ್ದೆ. ಅದೊಂದು ಭಯಾನಕ ಅನುಭವ. ಕೆಲವೇ ಕೆಲವು ಗಂಟೆಗಳಿಗಂತಾ ಹೋಗಿದ್ದ ನಾನು ಜೀವ ಉಳಿದರೆ ಸಾಕು ಎಂದು ವಾಪಸ್ಸು ಬಂದು ಬಿಟ್ಟಿದ್ದೆ.‘ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಕಾಮೆಂಟ್ ಹಾಕಿದ್ದಾರೆ.

ಇನ್ನೊಬ್ಬರು, ಈ ವಿಡಿಯೋ ನೋಡಿದಾಕ್ಷಣ ನನಗೆ ನಂಬಲು ಸಾಧ್ಯವೇ ಆಗಿಲ್ಲ. ಫುಡ್ ಡಿಲೆವರಿಯವರು ಮೆಕ್ಸಿಕೋದಲ್ಲಿ ವಿಭಿನ್ನವಾಗಿ ಜಾಹೀರಾತು ಕೊಡುತ್ತಿದ್ದಾರೆ ಎಂದು ನಾನು ಅಂದುಕೊಂಡಿದ್ದೆ ಎಂದು ತಮಾಷೆ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಈ ವಿಡಿಯೋ ನೋಡಿ ಕಾಮೆಂಟ್ ಹಾಕಿದ್ದಾರೆ.

Share This Article