ರೌಡಿಗಳು ಸಂಸದರೊಂದಿಗೆ ಇದ್ದರೆ ಪೊಲೀಸರೇನು ಮಾಡಲು ಸಾಧ್ಯ; ಸಿದ್ದರಾಮಯ್ಯ ಪ್ರಶ್ನೆ

khushihost
ರೌಡಿಗಳು ಸಂಸದರೊಂದಿಗೆ ಇದ್ದರೆ ಪೊಲೀಸರೇನು ಮಾಡಲು ಸಾಧ್ಯ; ಸಿದ್ದರಾಮಯ್ಯ ಪ್ರಶ್ನೆ

ಶಿವಮೊಗ್ಗ: ರೌಡಿ ಶೀಟರ್ ಗಳು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯವರು ಹೇಳುವುದು ಒಂದು ಮಾಡುವುದು ಒಂದು ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರೌಡಿಗಳ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಎಂಪಿಗಳ ಜೊತೆ ರೌಡಿಶೀಟರ್ ಗಳು ಇರುವಾಗ ಖಾಕಿಗೆ ಹೇಗೆ ಅವನನ್ನು ಹಿಡಿಯಲು ಧೈರ್ಯ ಬರುತ್ತೆ? ಬಿಜೆಪಿಯವರು ಅವನ ಜೊತೆ ಸೇರಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸ್ವತಃ ಎಂಪಿಗಳೇ ಆತನ ಜೊತೆಗಿದ್ದರೆ ಪೊಲೀಸರು ಹೇಗೆ ಅರೆಸ್ಟ್ ಮಾಡುತ್ತಾರೆ? ಕಾನೂನು ಕ್ರಮ ಕೈಗೊಳ್ಳಲು ಆಗುತ್ತಾ? ಬಿಜೆಪಿಯವರು ನೀತಿ ಹೇಳುವುದು ಎಂದರೆ ಇದೇನಾ? ಹೇಳುವುದೊಂದು ಮಾಡುವುದು ಒಂದು ಎಂದು ಗುಡುಗಿದರು.

Share This Article