ಕುಂಭಮೇಳ ಕಾಲ್ತುಳಿತದಲ್ಲಿ ಬೆಳಗಾವಿಯ ಆರು ಜನರಿಗೆ ಗಾಯ, ನಾಲ್ವರು ಕಾಣೆ

khushihost
ಕುಂಭಮೇಳ ಕಾಲ್ತುಳಿತದಲ್ಲಿ ಬೆಳಗಾವಿಯ ಆರು ಜನರಿಗೆ ಗಾಯ, ನಾಲ್ವರು ಕಾಣೆ

ಬೆಳಗಾವಿ, ೨೯: ಬೆಳಗಾವಿಯಿಂದ ಪ್ರಯಾಗರಾಜ‌ನ ಕುಂಭಮೇಳಕ್ಕೆ 500 ಕ್ಕೂ ಅಧಿಕ ಜನ ತೆರಳಿದ್ದು, ರಾತ್ರಿ ಒಂದು ಗಂಟೆ ಸುಮಾರಿಗೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಇಬ್ಬರು ಮಹಿಳಾ ಬಿಜೆಪಿ ಕಾರ್ಯಕರ್ತರು ಸೇರಿ ಆರು ಜನರಿಗೆ ಗಾಯಗಳಾಗಿವೆ.‌

ಬೆಳಗಾವಿಯ ವಡಗಾವಿ ನಿವಾಸಿ ಸರೋಜಿನಿ ನಡುವಿನಹಳ್ಳಿ, ಬೆಳಗಾವಿಯ ಶೆಟ್ಟಿ ಗಲ್ಲಿಯ ಅರುಣ ಹಾಗೂ ಕಾಂಚನಾ ಕೋಪರ್ಡೆ ದಂಪತಿ, ಬಾಲಕಿಯರಾದ ಮೇಗಾ, ಜ್ಯೋತಿ ಕೂಡ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ.

ಕೋಪರ್ಡೆ ದಂಪತಿಗಳನ್ನು ಪ್ರಯಾಗರಾಜನ ಎರಡು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಸೇರಿಸಲಾಗಿದೆ. ಘಟನೆಯಲ್ಲಿ ರಾಜ್ಯದ ಇನ್ನೂ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮೂರು ದಿನಗಳ ಹಿಂದೆ ಬೆಳಗಾವಿಯಿಂದ ಪ್ರಯಾಗ‌ಗೆ ಇವರು ತೆರಳಿದ್ದರು.‌ ಗಾಯಾಳುಗಳಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಬೆಳಗಾವಿಯ 9 ಜನ ಸೇರಿದಂತೆ ಕರ್ನಾಟಕದಿಂದ ಎರಡು ಬಸ್ ಗಳಲ್ಲಿ 60 ಜನ ಕುಂಭಮೇಳಕ್ಕೆ ತೆರಳಿದ್ದರು. ಮಂಗಳವಾರ ಬೆಳಗಾವಿಯ ತಂಡದಲ್ಲಿನ 5 ಜನ ಬೇರೆಯಾಗಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

Share This Article