ಮಹಾರಾಷ್ಟ್ರ ಬಸ್ ಗಳಿಗೆ ಕರ್ನಾಟಕದಲ್ಲಿ ಮಸಿ 

khushihost
ಮಹಾರಾಷ್ಟ್ರ ಬಸ್ ಗಳಿಗೆ ಕರ್ನಾಟಕದಲ್ಲಿ ಮಸಿ 

ಕಲಬುರಗಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕೆ ಸೇರಿದ ಬಸ್​ಗಳಿಗೆ ಮಸಿ ಬಳಿಯಲಾಗಿತ್ತು. ಇದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಹಾರಾಷ್ಟ್ರ ಬಸ್​ಗಳಿಗೆ ಕಪ್ಪು ಮಸಿ ಬಳಿದು ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿಯಲ್ಲಿ ಮಹಾರಾಷ್ಟ್ರಕ್ಕೆ ಸೇರಿದ ಬಸ್​ ತಡೆದು ಮಸಿ ಬಳಿದಿದ್ದಾರೆ. ಬಸ್ ಮುಂಭಾಗದ ಗ್ಲಾಸ್​ಗೆ ಬಿತ್ತಿ ಪತ್ರ ಅಂಟಿಸಿ ಪ್ರತಿಭಟಿಸಿದ್ದಾರೆ.

Share This Article