ಎಸ್ ಎಸ್ ಎಲ್ ಸಿ, ಪಿಯುಸಿ‍‍, ಪದವಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಖಾಸಗಿ ಉದ್ಯೋಗ

khushihost
ಎಸ್ ಎಸ್ ಎಲ್ ಸಿ, ಪಿಯುಸಿ‍‍, ಪದವಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ ಖಾಸಗಿ ಉದ್ಯೋಗ

ಹುಬ್ಬಳ್ಳಿ: ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನವೆಂಬರ್ 25 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ 4 ರಿಂದ 7 ಖಾಸಗಿ ರಂಗದ ಉದ್ಯೋಗದಾತರು ಭಾಗವಹಿಸಿ, ತಮ್ಮ ಸಂಸ್ಥೆಯಲ್ಲಿಯ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೊಮಾ (ಮ್ಯೆಕಾನಿಕಲ್, ಇಲೆಕ್ಟ್ರಿಕಲ್, ಏಲೆಕ್ಟ್ರಾನಿಕ್ಸ್), ಬಿ.ಎಸ್‌ಸಿ(ಕೆಮಿಸ್ಟ್ರಿ) ಹಾಗೂ ಯಾವುದೇ ಪದವೀಧರರು ಸಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳು ಭಾವಚಿತ್ರ, ಆಧಾರ್ ಕಾರ್ಡ್, ಬಯೋಡೆಟಾಗಳ ಹೆಚ್ಚಿನ ಪ್ರತಿಗಳೊಂದಿಗೆ(ಕನಿಷ್ಟ 5 ಪ್ರತಿಗಳು) ತಮ್ಮ ಸ್ವಂತ ಖರ್ಚಿನಲ್ಲಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0836-2225288, 8105693234, 8453208555 ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Share This Article