ಬಳ್ಳಾರಿಗೆ ತೆರಳಲು ಜನಾರ್ಧನ ರೆಡ್ಡಿಗೆ ಸುಪ್ರೀಮ ಕೋರ್ಟ ಅನುಮತಿ 

khushihost
ಬಳ್ಳಾರಿಗೆ ತೆರಳಲು ಜನಾರ್ಧನ ರೆಡ್ಡಿಗೆ ಸುಪ್ರೀಮ ಕೋರ್ಟ ಅನುಮತಿ 

ಹೊಸದಿಲ್ಲಿ : ಅಕ್ರಮ ಗಣಿ ಹಗರಣ ಪ್ರಕರಣ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಸುಪ್ರೀಮ ಕೋರ್ಟ‌ ಅನುಮತಿ ನೀಡಿದೆ. ಮಗಳ ಹೆರಿಗೆ ಹಿನ್ನೆಲೆ ಒಂದು ತಿಂಗಳು ಮಾತ್ರ ತೆರಳಲು ಅನುಮತಿಯನ್ನು ಸುಪ್ರೀಮ ಕೋರ್ಟ‌ ನೀಡಲಾಗಿದೆ.

ಅಕ್ರಮ ಗಣಿ ಹಗರಣ ಪ್ರಕರಣ ಎದುರಿಸುತ್ತಿರುವ ಗಣಿಧಣಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಳ್ಳಾರಿಗೆ ಹೋಗಲು ಅವಕಾಶ ಕೊಡಿ ಎಂದು ಸುಪ್ರೀಮ ಕೋರ್ಟ ಮೆಟ್ಟಿಲೇರಿದ್ದರು.

ಕೆಲವು ದಿನಗಳಲ್ಲೇ ತನ್ನ ಮಗಳಿಗೆ ಹೆರಿಗೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಒಂದು ತಿಂಗಳಾದರೂ ತನಗೆ ಬಳ್ಳಾರಿಗೆ ಹೋಗಲು ಅನುಮತಿ ನೀಡುವಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸುಪ್ರೀಮ ಕೋರ್ಟ​ಗೆ ಮನವಿ ಮಾಡಿದ್ದರು.

ಸಿಬಿಐ ಎರಡು ತಿಂಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ನ್ಯಾ. ಎಂಆರ್. ಶಾ ನೇತೃತ್ವದ ದ್ವಿಸದಸ್ಯ ಪೀಠವು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಇಂದು ವಿಚಾರಣೆ ನಡೆಸಿತ್ತು.

ಇದೀಗ ಮಗಳ ಹೆರಿಗೆ ಹಿನ್ನೆಲೆ 1 ತಿಂಗಳ ಕಾಲ ಮಾತ್ರ ಬಳ್ಳಾರಿಗೆ ತೆರಳಲು ತೆರಳಲು ಅನುಮತಿ ಸುಪ್ರೀಮ ಕೋರ್ಟ‌ ನೀಡಲಾಗಿದೆ.

Share This Article