ಮೋದಿಗೆ ಮರಣದಂಡನೆ ವಿಧಿಸಲು ತೀಸ್ತಾ ಸೆಟಲ್ವಾಡ್ ಸಂಚು ರೂಪಿಸಿದ್ದರು -ಎಸ್ಐಟಿ

khushihost
ಮೋದಿಗೆ ಮರಣದಂಡನೆ ವಿಧಿಸಲು ತೀಸ್ತಾ ಸೆಟಲ್ವಾಡ್ ಸಂಚು ರೂಪಿಸಿದ್ದರು  -ಎಸ್ಐಟಿ

ಹೊಸದಿಲ್ಲಿ: 2002ರ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಮರಣದಂಡನೆ ವಿಧಿಸಲು ಸಾಮಾಜಿಕ ಕಾರ್ಯಕರ್ತೆ ಮತ್ತು ಕೋಮು ಗಲಭೆಗಳ ಸಂತ್ರಸ್ತರ ಪರ ಹೋರಾಟ ನಡೆಸುವ ತೀಸ್ತಾ ಸೆಟಲ್ವಾಡ್ ಅವರು ಸಂಚು ರೂಪಿಸಿದ್ದರು ಎಂದು ವಿಶೇಷ ತನಿಖಾ ತಂಡ ಸಲ್ಲಿಸಿರುವ ಚಾರ್ಜಶೀಟ್ ನಲ್ಲಿ ತಿಳಿಸಿದೆ.

ಸೆಟಲ್ವಾಡ್, ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ ಮತ್ತು ಮಾಜಿ ಹಿರಿಯ ಪೊಲೀಸ ಅಧಿಕಾರಿ ಸಂಜೀವ ಭಟ್ ಅವರ ವಿರುದ್ಧ 100 ಪುಟಗಳ ಸುದೀರ್ಘ ಚಾರ್ಜಶೀಟ್ ಅನ್ನು ಅಹಮದಾಬಾದ ಮೆಟ್ರೋ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಎಸ್‌ಐಟಿ ವರದಿ ಪ್ರಕಾರ , ಆರೋಪಿಗಳು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಮರಣದಂಡನೆ ವಿಧಿಸಲು ಸಂಚು ರೂಪಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಸರ್ಕಾರದ ಭಾಗವಾಗಿದ್ದರೂ ಆರ್ . ಬಿ ಶ್ರೀಕುಮಾರ ಮತ್ತು ಹಿರಿಯ ಪೊಲೀಸ ಅಧಿಕಾರಿಯಾಗಿದ್ದ ಸಂಜೀವ ಭಟ್ ಅವರು ತೀಸ್ತಾಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಂತರ ಅವುಗಳನ್ನು ಅಧಿಕೃತ ನಮೂದುಗಳಿಗೆ ಸೇರಿಸಿದ್ದಾರೆ ಎಂದು ಅದು ಹೇಳಿದೆ.

Share This Article