ವಿಜಯಪುರದಲ್ಲಿ ಭೀಕರ ಅಪಘಾತ : ಮೂವರ ಸಾವು

khushihost
ವಿಜಯಪುರದಲ್ಲಿ ಭೀಕರ ಅಪಘಾತ : ಮೂವರ ಸಾವು

ವಿಜಯಪುರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಕೋಲ್ಹಾರ ತಾಲೂಕಿನ ಕುಬಕಡ್ಡಿ ಕ್ರಾಸ್ ಬಳಿ ಘಟನೆ ನಡೆದಿದೆ.

ಮೃತ ದುರ್ದೈವಿಗಳನ್ನು ಕಲಬುರಗಿ ಜಿಲ್ಲೆಯ ಮೂಲದ ಕಲಶೆಟ್ಟಿ ಕುಟುಂಬದ ಸುನಂದಾ ಮಲ್ಲಿಕಾರ್ಜುನ ಕಲಶೆಟ್ಟಿ(25), ಅವರ ಮೂರು ತಿಂಗಳ ಮಗಳು ಸುಮನ್ ಹಾಗೂ ಶರಣಮ್ಮ ಕಲಶೆಟ್ಟಿ (55) ಎಂದು ಗುರುತಿಸಲಾಗಿದೆ. ಕಾರು ಚಾಲಕ, ಇಬ್ಬರು ಮಕ್ಕಳು ಹಾಗೂ ಮಹಿಳೆಗೆ ಗಂಭೀರ ಗಾಯಗಳಾಗಿವೆ.

ಕಾರು ಓವರ್ ಟೇಕ್ ಮಾಡಲು ಹೋಗಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಬಳಿಕ ತಿರುಗಿದ ಕಾರಿಗೆ ಹಿಂಬದಿಯಿಂದ ಬಸ್​ ಗುದ್ದಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article