ನಂದಿನಿ ಹಾಲು, ಮೊಸರಿನ ದರ ಹೆಚ್ಚಳ ಆದೇಶಕ್ಕೆ ಮುಖ್ಯಮಂತ್ರಿ ತಡೆ

khushihost
ನಂದಿನಿ ಹಾಲು, ಮೊಸರಿನ ದರ ಹೆಚ್ಚಳ ಆದೇಶಕ್ಕೆ ಮುಖ್ಯಮಂತ್ರಿ ತಡೆ

ಬೆಂಗಳೂರು: ಹಾಲು ಮತ್ತು ಮೊಸರಿನ ದರವನ್ನು 3ರೂ.ಗೆ ಏರಿಕೆ ಮಾಡಿದ್ದ ಕೆಎಂಎಫ್​ನ ಆದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ಹಿಡಿದಿದ್ದಾರೆ.

ಬೆಲೆ ಏರಿಕೆ ಬಗ್ಗೆ ನವೆಂಬರ 20ರಂದು ನಡೆಯುವ ಸಭೆ ಬಳಿಕ ನಿರ್ಧಾರ ಮಾಡಲಾಗುತ್ತದೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

ನಿನ್ನೆ ಕೆಎಂಎಫ್​​ ಹಾಲಿನ ಮತ್ತು ಮೊಸರಿನ ದರವನ್ನು 3ರೂ.ಗೆ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದಾದ ಬಳಿಕ ಕಲಬುರಗಿಯ ಸೇಡಂನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಲಿನ ದರ ಏರಿಕೆ ಇಲ್ಲ, ನವೆಂಬರ 20ರ ನಂತರ ಸಭೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದರು.

Share This Article