ಹೆಂಡತಿ ಜೊತೆಗಿನ ಜಗಳ; ಸಿಟ್ಟಿನಲ್ಲಿ 3ನೇ ಮಹಡಿಯಿಂದ ಮಗು ಎಸೆದೂ ತಾನೂ ಹಾರಿದ ತಂದೆ!

khushihost
ಹೆಂಡತಿ ಜೊತೆಗಿನ ಜಗಳ; ಸಿಟ್ಟಿನಲ್ಲಿ 3ನೇ ಮಹಡಿಯಿಂದ ಮಗು ಎಸೆದೂ ತಾನೂ ಹಾರಿದ ತಂದೆ!

ಹೊಸದಿಲ್ಲಿ, ೧೭- ಇಲ್ಲಿನ ಕಲ್ಕಾಜಿಯ ಕೊಳಗೇರಿಯಲ್ಲಿ ಗಂಡ-ಹೆಂಡತಿ ಮಧ್ಯೆ ಜಗಳ ನಡೆದ ಬಳಿಕ ಪತಿ ಮೂರು ಅಂತಸ್ತಿನ ಎತ್ತರದ ಬಾಲ್ಕನಿಯಿಂದ ಎರಡು ವರ್ಷದ ಮಗುವನ್ನು ಎಸೆದು ತಂದೆ ತಾನೂ ಜಿಗಿದಿದ್ದಾನೆ.

ಗಾಯಗೊಂಡಿರುವ ತಂದೆ ಮತ್ತು ಮಗುವನ್ನು ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್​ ಸೈನ್ಸ್​ಗೆ ದಾಖಲಿಸಲಾಗಿದೆ. ಮಾನ್​ಸಿಂಗ್ ಹಾಗೂ ಆತನ ಪತ್ನಿ ಪೂಜಾ ಕಳೆದ ಕೆಲವು ತಿಂಗಳುಗಳಿಂದ ಜಗಳವಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂಜಾ ಮನೆಯಿಂದ ಹೊರಟು ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ಶುಕ್ರವಾರ ರಾತ್ರಿ ಪತಿ ಪೂಜಾಳನ್ನು ಭೇಟಿಯಾಗಿ ಜಗಳವಾಡಿದ್ದ. ಕೋಪದ ಭರದಲ್ಲಿ ಅವನು ಮಗನನ್ನು ಬಾಲ್ಕನಿಯಿಂದ ಕೆಳಗೆ ಎಸೆದು ಬಳಿಕ ತಾನೂ ಕೂಡ ಹಾರಿದ್ದನು. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article