ನಟಿಗೆ ಚಾಕುವಿನಿಂದ ಇರಿದ ಪತಿ

khushihost
ನಟಿಗೆ ಚಾಕುವಿನಿಂದ ಇರಿದ ಪತಿ

ಬೆಂಗಳೂರು : ಕಿರುತೆರೆಯ ಖ್ಯಾತ ನಟಿಗೆ ಪತಿಯೇ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಮುನೇಶ್ವರ ಲೇಔಟನಲ್ಲಿ ನಡೆದಿದೆ.

ಮಂಜುಳಾ ಅಲಿಯಾಸ್ ಶೃತಿ ಚಾಕು ಇರಿತಕ್ಕೊಳಗಾದ ನಟಿ. ಅಮರೇಶ್ವರ್ ಪತ್ನಿಗೆ ಚಾಕು ಇರಿದ ಪತಿ. ಮಂಜುಳಾ ಮತ್ತು ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು.

ಅಲ್ಲದೇ ಕೆಲ ದಿನಗಳಿಂದ ಅಮರೇಶ್ ಪತ್ನಿ ವಿರುದ್ಧ ಆರೋಪ ಮಾಡಿ ಗಲಾಟೆ ಮಾಡುತ್ತಿದ್ದ. ಇದರಿಂದ ನೊಂದು ಮಂಜುಳಾ ಕಳೆದ ಏಪ್ರಿಲ್ ನಿಂದ ಅಮೇರೇಶನಿಂದ ದೂರವಿದ್ದರು. ಪತ್ನಿ ದೂರವಾಗುತ್ತಿದಂತೆ ಮತ್ತೆ ಹೋಗಿ ಸಂಧಾನದ ಮೂಲಕ ವಾಪಸ್ ಕರೆದುಕೊಂಡು ಬಂದಿದ್ದ. ಕೆಲ ದಿನಗಳಿಂದ ಚನ್ನಾಗಿಯೇ ಇದ್ದ ಸಂಸಾರದಲ್ಲಿ ಮತ್ತೆ ಜಗಳ ಆರಂಭವಾಗಿದೆ. ಅಮರೇಶನು ಮಂಜುಳಾ ಶೀಲ ಶಂಕಿಸಿ ಗಲಾಟೆ ಆರಂಭಿಸಿದ್ದ, ಇದೇ ಕಾರಣಕ್ಕೆ ಮಂಜುಳಾ ಅವರಿಗೆ ಚಾಕು ಇರಿದಿದ್ದು, ಗಂಭೀರವಾಗಿ ಹಲ್ಲೆಗೊಳಗಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article