ಹೋಟೆಲ್ ಅಡುಗೆ, ನೀರಿನ ಬಾಟಲ್; ದಲಿತರ ಮನೆ ಊಟ ಎಂಬ ಕಪಟ ನಾಟಕ; ಕಾಂಗ್ರೆಸ್ ವ್ಯಂಗ್ಯ

khushihost
ಹೋಟೆಲ್ ಅಡುಗೆ, ನೀರಿನ ಬಾಟಲ್; ದಲಿತರ ಮನೆ ಊಟ ಎಂಬ ಕಪಟ ನಾಟಕ; ಕಾಂಗ್ರೆಸ್ ವ್ಯಂಗ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಗುರುವಾರ ವಿಜಯನಗರ ಜಿಲ್ಲೆ ಹಿರೇ ಹಡಗಲಿಯ ನವಲಿ ಹನುಮಂತವ್ವ ಎಂಬವರ ಮನೆಯಲ್ಲಿ ಉಪಹಾರ ಸೇವಿಸಿದ್ದರು. ಈ ಕುರಿತಂತೆ ಟ್ವೀಟ್ ಮಾಡಿ ಕಾಂಗ್ರೆಸ್  ವ್ಯಂಗ್ಯವಾಡಿದೆ.

ಹೋಟೆಲ್ ಅಡುಗೆ, ಮಿನರಲ್ ವಾಟರ್ ಬಾಟಲ್ ಗಳು, ಹೊಸದಾಗಿ ತರಿಸಿದ ಪ್ಲೇಟುಗಳು, ಮನೆ ಮಾತ್ರ ದಲಿತರದ್ದು ಎಂದು ಹೇಳಿದೆ. ಇದು ದಲಿತರ ಮನೆಯ ಊಟ ಎಂಬ ಕಪಟ ನಾಟಕದಲ್ಲಿ ಬಿಜೆಪಿ ಕರ್ನಾಟಕ ಮಾಡಿದ ಅಸಲಿ ಅಸ್ಪೃಶ್ಯತೆಯ ಆಚರಣೆ ಎಂದಿರುವ ಕಾಂಗ್ರೆಸ್, ದಲಿತರು ಮನುವಾದಿ ಬಿಜೆಪಿಯವರನ್ನು ಮನೆಯೊಳಗೆ ಸೇರಿಸದೇ ಸ್ವಾಭಿಮಾನ ಕಾಪಾಡಿಕೊಳ್ಳಬೇಕು. ಬಾಬಾಸಾಹೇಬರ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದೆ.

Share This Article