ಶೀಘ್ರದಲ್ಲೇ ಬೆಳಗಾವಿಗೆ ಬರುತ್ತೇವೆ ಎಂದು ಪುನರುಚ್ಛರಿಸಿದ ಮಹಾರಾಷ್ಟ್ರ ಸಚಿವ

khushihost
ಶೀಘ್ರದಲ್ಲೇ ಬೆಳಗಾವಿಗೆ ಬರುತ್ತೇವೆ ಎಂದು ಪುನರುಚ್ಛರಿಸಿದ ಮಹಾರಾಷ್ಟ್ರ ಸಚಿವ

ಮುಂಬೈ: ಬೆಳಗಾವಿಗೆ ಶೀಘ್ರ ಭೇಟಿ ನೀಡುತ್ತೇವೆ ಎಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ ದೇಸಾಯಿ ತಿಳಿಸಿದ್ದಾರೆ.

ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ, ಶೀಘ್ರದಲ್ಲಿ ಬೆಳಗಾವಿಗೆ ಭೇಟಿ ನೀಡುತ್ತೇವೆ. ಸದ್ಯದಲ್ಲೇ ಭೇಟಿ ದಿನಾಂಕವನ್ನೂ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಇಂದು ಬೆಳಗಾವಿಗೆ ಭೇಟಿ ನೀಡುತ್ತಿಲ್ಲವಷ್ಟೇ. ಕಾರ್ಯಕ್ರಮವನ್ನು ಮುಂದೂಡಿದ್ದೇವೆಯೇ ಹೊರತು ಬೆಳಗಾವಿ ಭೇಟಿ ರದ್ದಾಗಿಲ್ಲ. ಬಾಬಾ ಸಾಹೇಬ್ ಪರಿನಿರ್ಮಾಣ ದಿನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಗೆ ಹೋಗುತ್ತಿಲ್ಲ. ಆದರೆ ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಹೋಗುತ್ತೇವೆ, ಬೆಳಗಾವಿಗೆ ಭೇಟಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

Share This Article