ಬ್ಯಾಂಕ್ ಗೆ ವಂಚಿಸಿ ಹೆಂಡತಿಯ ಖಾತೆಗೆ ಕೋಟ್ಯಾಂತರ ಹಣ ವರ್ಗಾಯಿಸಿದ ಮ್ಯಾನೇಜರ

khushihost
ಬ್ಯಾಂಕ್ ಗೆ ವಂಚಿಸಿ ಹೆಂಡತಿಯ ಖಾತೆಗೆ ಕೋಟ್ಯಾಂತರ ಹಣ ವರ್ಗಾಯಿಸಿದ ಮ್ಯಾನೇಜರ

ಕಾರವಾರ : ಜಿಲ್ಲೆಯ ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕರೊಬ್ಬರು ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ 2.69 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿ ಮೋಸ ಮಾಡಿರುವ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಾಯಕ ವ್ಯವಸ್ಥಾಪಕನಾಗಿರುವ ಆಂಧ್ರ ಪ್ರದೇಶ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ ಎಂಬಾತ ಕಳೆದ ಏಪ್ರಿಲ್ 7 ರಿಂದ ಸೆಪ್ಟೆಂಬರ್ 9 ರವರೆಗಿನ ಅವಧಿಯಲ್ಲಿ ಹಣ ವರ್ಗಾವಣೆ ಮಾಡಿದ್ದಾನೆ.

ಬ್ಯಾಂಕ್ ಸಿಬ್ಬಂದಿಯ ಲಾಗಿನ್​ನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಆಂಧ್ರ ಪ್ರದೇಶ ಚಿರಲಾದ ಎಸ್.ಬಿ.ಐ.ಯಲ್ಲಿ ಖಾತೆ ಹೊಂದಿರುವ ಪತ್ನಿ ರೇವತಿ ಪ್ರಿಯಾಂಕ ಗೊರ್ರೆಯ ಖಾತೆಗೆ 2 ಕೋಟಿ 69 ಲಕ್ಷ  ರೂಪಾಯಿ ವರ್ಗಾವಣೆ ಮಾಡಿ ಮೋಸ ಮಾಡಿದ್ದಾನೆ. ಈ ಕುರಿತು ಶಾಖಾ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ದೂರು ನೀಡಿದ್ದಾರೆ.

Share This Article