ಮಕ್ಕಳ ಕಳ್ಳನೆಂದು ಭಿಕ್ಷುಕನನ್ನು ಮನಬಂದಂತೆ ಥಳಿಸಿದ ಜನ

khushihost
ಮಕ್ಕಳ ಕಳ್ಳನೆಂದು ಭಿಕ್ಷುಕನನ್ನು ಮನಬಂದಂತೆ ಥಳಿಸಿದ ಜನ

ಯಾದಗಿರಿ : ಮಕ್ಕಳ ಕಳ್ಳನೆಂದು ಭಿಕ್ಷುಕನೊಬ್ಬನನ್ನು ಮನಬಂದಂತೆ ಥಳಿಸಿದ ದುರಂತ ಘಟನೆ ನಗರದ ಹತ್ತಿಕುಣಿ ಕ್ರಾಸ್‌ ಬಳಿ ನಡೆದಿದೆ.

ನಂತರ ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಭಿಕ್ಷುಕನ ರಕ್ಷಣೆ ಮಾಡಿದರು. ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದಲ್ಲಿ ಮಕ್ಕಳ ಕಳವಿನ ಬಗ್ಗೆ ಹರಡುತ್ತಿರುವ ವದಂತಿಗಳೆಲ್ಲವೂ ಸುಳ್ಳು. ಇಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ. ಅಮಾಯಕರ ಮೇಲೆ ದಾಳಿ ನಡೆಸಬೇಡಿ ಎಂದು ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದರೂ ಅಮಾಯಕರ ಮೇಲಿನ ದಾಳಿಗಳು ಮುಂದುವರಿದಿವೆ.

Share This Article