ಎರಡು ಸಾವಿರ ಹುದ್ದೆ ರದ್ದುಪಡಿಸಲು ಉಪ ಸಮಿತಿ ಶಿಫಾರಸು 

khushihost
ಎರಡು ಸಾವಿರ ಹುದ್ದೆ ರದ್ದುಪಡಿಸಲು ಉಪ ಸಮಿತಿ ಶಿಫಾರಸು 

ಬೆಂಗಳೂರು : ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸಚಿವಾಲಯ ಮಟ್ಟದ ಉನ್ನತ ಹಾಗೂ ಹಿರಿಯ ಶ್ರೇಣಿಯ ಎರಡು ಸಾವಿರ ಹುದ್ದೆಗಳನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟದ ಉಪಸಮಿತಿ ಶಿಫಾರಸು ಮಾಡಿದೆ.

ವಿಧಾನಸೌಧದಲ್ಲಿ ಸಚಿವ ಆರ್. ಅಶೋಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟದ ಉಸಮಿತಿಯು ಈ ನಿರ್ಣಯ ತೆಗೆದುಕೊಂಡಿದ್ದು, ಕೃಷಿ ಇಲಾಖೆಯಡಿ ಬರುವ ಮೈಸೂರು ತಂಬಾಕು ಕಂಪನಿ, ಕೃಷಿ ಕೈಗಾರಿಕೆ ನಿಗಮ, ಆಹಾರ ನಿಗಮ, ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲಿನ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳ ಹುದ್ದೆಗಳು, ಕೆಳಹಂತದ ಸಿಬ್ಬಂದಿ ಕೃಷಿ ಇಲಾಖೆಗೆ ಹಸ್ತಾಂತರಿಸುವ ಕುರಿತು ಶಿಫಾರಸು ಮಾಡಲಾಗಿದೆ.

ರಾಮನಗರ, ಚನ್ನಪಟ್ಟಣ, ಕನಕಪುರ, ಬೆಂಗಳೂರು ಏರ್​ಪೋರ್ಟ್ ಸೇರಿ 10 ಯೋಜನಾ ಪ್ರಾಧಿಕಾರಗಳ ರದ್ದು, ಪ್ರತಿ ಜಿಲ್ಲೆಗೆ ಒಂದು ಯೋಜನಾ ಪ್ರಾಧಿಕಾರ ರಚನೆ ಮಾಡಲು ನಿರ್ಧರಿಸಲಾಗಿದೆ.

Share This Article