ಗೋಕಾಕ : ಇಳಿಯಿತು ಚಿಕ್ಕೋಳಿ ಸೇತುವೆ ಮೇಲಿನ ನೀರು

khushihost
ಗೋಕಾಕ : ಇಳಿಯಿತು ಚಿಕ್ಕೋಳಿ ಸೇತುವೆ ಮೇಲಿನ ನೀರು

ಗೋಕಾಕ : ಶನಿವಾರ ಮತ್ತು ರವಿವಾರ ಮಳೆ ಆರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ಮಾರ್ಕಂಡೇಯ ನದಿಯ ಒಳಹರಿವಿನಲ್ಲಿ ಇಳಿಕೆಯಾಗಿದ್ದು ‌ ಕಳೆದ ಎರಡು ದಿನಗಳಿಂದ ಬಂದ್ ಆಗಿದ್ದ ಇಲ್ಲಿನ ಚಿಕ್ಕೋಳಿ ಸೇತುವೆ ಮೇಲಿನ ನೀರು ಇಂದು ಇಳಿದಿದೆ.

ಗೋಕಾಕ ತಹಶೀಲ್ದಾರ್ ಸೇರಿದಂರೆ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆಯ ಪರಿಶೀಲನೆ ನಡೆಸಿದರು.

ಸೇತುವೆಯ ಪರಿಸ್ಥಿತಿಯನ್ನು ಗಮನಿಸಿಕೊಂಡು ಸದ್ಯ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು ನೀರು ಸಂಪೂರ್ಣವಾಗಿ ಇಳಿಕೆ ಕಂಡ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಅನುವು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Share This Article