ಪ್ರಸಕ್ತ ಸಾಲಿನ ಸಿಇಟಿಗೆ ಮೀಸಲಾತಿ ಇಲ್ಲ

khushihost
ಪ್ರಸಕ್ತ ಸಾಲಿನ ಸಿಇಟಿಗೆ ಮೀಸಲಾತಿ ಇಲ್ಲ

ಬೆಂಗಳೂರು: ಸುಪ್ರೀಮ ಕೋರ್ಟ ಎತ್ತಿ ಹಿಡಿದಿರುವ ಮೇಲ್ವರ್ಗದ ಆರ್ಥಿಕ ದುರ್ಬಲರ ಶೇಕಡ 10 ರಷ್ಟು ಮೀಸಲಾತಿ ಪ್ರಸಕ್ತ ಸಾಲಿನ ಸಿಇಟಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ.

ರಾಜ್ಯದಲ್ಲಿ 2022 -23ನೇ ಸಾಲಿನ ವೃತ್ತಿಪರ ಕೋರ್ಸಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವ ಕಾರಣ ಇಡಬ್ಲ್ಯೂಎಸ್ ಮೀಸಲಾತಿ ಅನ್ವಯವಾಗುವುದಿಲ್ಲ. ಈಗಾಗಲೇ ಸೀಟು ಹಂಚಿಕೆ ಆರಂಭವಾಗಿದೆ. ಮಧ್ಯದಲ್ಲಿ ಹೊಸ ನಿಯಮ ಅಳವಡಿಕೆ ಸಾಧ್ಯವಿಲ್ಲವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಸರ್ಕಾರದ ಹಂತದಲ್ಲಿ ಶೇಕಡ 10 ರಷ್ಟು ಮೀಸಲಾತಿ ಕಲ್ಪಿಸುವ ಕುರಿತಾಗಿ ನಿರ್ಣಯ ಕೈಗೊಳ್ಳಬೇಕಿದ್ದು, ಇದನ್ನು ಆಧರಿಸಿ ಪರೀಕ್ಷಾ ಪ್ರಾಧಿಕಾರ ಮೀಸಲಾತಿ ನಿಯಮ ಅಳವಡಿಸಿಕೊಳ್ಳಲಿದೆ. ಇಂಜಿನಿಯರಿಂಗ್, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಅಧಿಸೂಚನೆ ಹೊರಡಿಸಿ ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗಿದ್ದು, ಇಂತಹ ಸಂದರ್ಭದಲ್ಲಿ ಹೊಸ ನಿಯಮ ಅಳವಡಿಕೆ ಸಾಧ್ಯವಿಲ್ಲವೆಂದು ಹೇಳಲಾಗಿದೆ.

Share This Article