ಗೋವಾ ಜಲಗಡಿ ಅಕ್ರಮ ಪ್ರವೇಶ ಮಾಡಿದ ಕರ್ನಾಟಕದ ಮೂವರ ಬಂಧನ

khushihost
ಗೋವಾ ಜಲಗಡಿ ಅಕ್ರಮ ಪ್ರವೇಶ ಮಾಡಿದ ಕರ್ನಾಟಕದ ಮೂವರ ಬಂಧನ

ಪಣಜಿ: ಗೋವಾ ಜಲಗಡಿಯನ್ನು ಪ್ರವೇಶಿಸಿದ್ದಕ್ಕಾಗಿ ಕರ್ನಾಟಕದಿಂದ ಮೂವರು ಮೀನುಗಾರರನ್ನು ಗೋವಾದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೀನುಗಾರರು ನಿಯಮಗಳನ್ನು ಪಾಲಿಸದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೀನುಗಾರಿಕಾ ಸಚಿವ ನೀಲಕಂಠ ಹಳರಂಕರ ತಿಳಿಸಿದ್ದಾರೆ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ. ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ನಂತರ ಮೀನುಗಾರರನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಗೋವಾದ ಮೀನುಗಾರ ಸಮುದಾಯವು ನೆರೆಯ ರಾಜ್ಯಗಳ ಮೀನುಗಾರಿಕೆ ಟ್ರಾಲರ್‌ಗಳು ತಮ್ಮ ಪ್ರದೇಶದಲ್ಲಿ ಮೀನು ಹಿಡಿಯುತ್ತಿರುವ ಬಗ್ಗೆ ದೂರು ನೀಡಿದ್ದವು.

Share This Article