ಗಣಿ ಪ್ರದೇಶದಲ್ಲಿ ಮೂರು ವಜ್ರಗಳು ಪತ್ತೆ

khushihost
ಗಣಿ ಪ್ರದೇಶದಲ್ಲಿ ಮೂರು ವಜ್ರಗಳು ಪತ್ತೆ

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ ಬುಡಕಟ್ಟು ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮೂರು ವಜ್ರಗಳು ದೊರಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬದ್ವಾರ ಗ್ರಾಮದ ನಿವಾಸಿ ಶಂಬು ಅವರ ಪತ್ನಿ ವಿನಿತಾ ಗೊಂಡ್ ಅವರು ಗಣಿ ಪ್ರದೇಶವನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ. ಇಲ್ಲೆ ಅಗೆಯುವಾಗ ಮಹಿಳೆಯೊಬ್ಬರಿಗೆ, ಕ್ರಮವಾಗಿ 0.7 ಕ್ಯಾರೆಟ್, 0.20 ಕ್ಯಾರೆಟ್ ಮತ್ತು 1.48 ಕ್ಯಾರೆಟ್ ತೂಕದ ಮೂರು ಬಣ್ಣವಿಲ್ಲದ ವಜ್ರದ ತುಣುಕುಗಳು ಪತ್ತೆಯಾಗಿವೆ. ಇವುಗಳನ್ನು ಹರಾಜಿಗೆ ಇಡಲಾಗುವುದು. ಅಲ್ಲಿ ಅವುಗಳ ನಿಜವಾದ ಬೆಲೆ ತಿಳಿಯುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಹಿಳೆಗೆ ಸಿಕ್ಕ ಮೂರು ವಜ್ರಗಳಲ್ಲಿ ಒಂದು ವಜ್ರ ಅತ್ಯುತ್ತಮ ಗುಣಮಟ್ಟದ್ದಾಗಿದೆ. ಉಳಿದ ಎರಡು ಕಡಿಮೆ ಗುಣಮಟ್ಟದ್ದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Share This Article