ಬಸ್- ಬೈಕ್ ಡಿಕ್ಕಿ; ಮೂವರ ಸಾವು

khushihost
ಬಸ್- ಬೈಕ್ ಡಿಕ್ಕಿ; ಮೂವರ ಸಾವು

ರಾಯಬಾಗ, ೧೮- : ಬೈಕ್ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಮೇಲೆ ಹೊರಟಿದ್ದ ಮೂವರು ಸಾವಿಗೀಡಾದ ಘಟನೆ ರಾಯಭಾಗ ತಾಲೂಕಿನಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ರಾಯಬಾಗ ತಾಲ್ಲೂಕಿನ ಹಾಳಶಿರಬುರ ಗ್ರಾಮದ ಭಗವಂತ ಶಿವರಾಯ ಕಾಂಬಳೆ, ವಿಶ್ವನಾಥ ಕಾಂಬಳೆ ಮತ್ತು ಬಾಳಪ್ಪ ಕಾಂಬಳೆ ಮೂವರು ಪ್ರಯಾಣಿಸುತ್ತಿದ್ದ ಬೈಕ್, ಬಸ್ ನೊಂದಿಗೆ ಡಿಕ್ಕಿಯಾಗಿದ್ದರಿಂದ ಅಸುನೀಗಿರುವ ಘಟನೆ ಹಾರೂಗೇರಿ-ಕುಡಚಿ ರಸ್ತೆಯಲ್ಲಿ ಸಂಭವಿಸಿದೆ.

ಅಪಘಾತದ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article