ಮನೆ ಗೋಡೆ ಕುಸಿದು ಇಬ್ಬರ ಸಾವು 

khushihost
ಮನೆ ಗೋಡೆ ಕುಸಿದು ಇಬ್ಬರ ಸಾವು 

ಕಾರವಾರ: ಮನೆ ಗೋಡೆ ತೆರವುಗೊಳಿಸುವಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಅಂಕೋಲಾ‌ ತಾಲೂಕಿನ ಭಾವಿಕೇರಿಯಲ್ಲಿ ನಡೆದಿದೆ.

ಮಧುಕರ ನಾಯಕ (58) ಹಾಗೂ ಶಾಂತಾರಾಮ ನಾಯಕ (58) ಮೃತರು. ಮಧುಕರ ನಾಯಕ ಅವರ ಹಳೆಯ ಮನೆಯ ಗೋಡೆ ತೆರವುಗೊಳಿಸಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗೋಡೆ ಕುಸಿದು ಬಿದ್ದಿದೆ.

ಮಣ್ಣಿನ ಅಡಿಯಲ್ಲಿ ಸಿಲುಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಪ್ರತ್ಯೇಕವಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಓರ್ವ ಕುಮಟಾ ಬಳಿ, ಇನ್ನೋರ್ವ ಕುಂದಾಪುರದ ಬಳಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಾಗಿದೆ

Share This Article