ಕಾರು ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು 

khushihost
ಕಾರು ತೊಳೆಯಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು 

ಗದಗ : ಅಮಾವಾಸ್ಯೆ ಪೂಜೆಯ ಹಿನ್ನೆಲೆಯಲ್ಲಿ ಕಾರು ತೊಳೆಯಲೆಂದು ಕಾಲುವೆ ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

ಅರುಣ ಪಡೆಸೂರ (25) ಹಾಗೂ ಹನುಮಂತ ಮಜ್ಜಿಗೆ (30) ನಾಪತ್ತೆಯಾದ ಯುವಕರು. ಅವರು ಮಲಪ್ರಭಾ ನದಿಯ ಕಾಲುವೆಗೆ ಕಾರು‌ ಸ್ವಚ್ಛಗೊಳಿಸಲು ತೆರಳಿದ್ದರು. ಇಬ್ಬರೂ ಯುವಕರು ಕಾಲುವೆಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಕಾರು ತೊಳೆಯಲು ನೀರು ತರಲೆಂದು ಇಳಿದ ವೇಳೆ ಒಬ್ಬಾತ ಜಾರಿ ಬಿದ್ದು, ಇನ್ನೊಬ್ಬ ಆತನ ರಕ್ಷಣೆಗೆ ಹೋಗಿರುವ ಸಾಧ್ಯತೆ ಇದೆ.

ಯುವಕರ ಪತ್ತೆಗಾಗಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article