ವಣ್ಣೂರ ಕೊಲೆ ರಹಸ್ಯ ಬಯಲು: ಪತ್ನಿ ಸಮೇತ ಮೂವರ ಬಂಧನ

khushihost
ವಣ್ಣೂರ ಕೊಲೆ ರಹಸ್ಯ ಬಯಲು: ಪತ್ನಿ ಸಮೇತ ಮೂವರ ಬಂಧನ

ಬೈಲಹೊಂಗಲ, 21:  ತಾಲೂಕಿನ ವಣ್ಣೂರ ಗ್ರಾಮದಲ್ಲಿ ಮನೆಯ ಕಟ್ಟಿಯ ಮೇಲೆ ಮಲಗಿದ್ದ ವ್ಯಕ್ತಿಯನ್ನು ಕೊಲೆಯ ರಹಸ್ಯ ಬಯಲಾಗಿದ್ದು ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿ ಮೂವರು ಆರೋಪಿಗಳನ್ನು ನೇಸರಗಿ ಪೊಲೀಸರು ಬಂಧಿಸಿದ್ದಾರೆ.

ಮನೆಯ ಕಟ್ಟಿಯ ಮೇಲೆ ಮಲಗಿದ್ದ ನಿಂಗಪ್ಪ ಅರವಳ್ಳಿಯನ್ನು ಕೊಚ್ಚಿ ಕೊಲೆ ಮಾಡಲು ಆತನ ಪತ್ನಿಯೇ ಸುಪಾರಿ ಕೊಟ್ಟು ಕೊಲೆ ‌ಮಾಡಿಸಿದ ಪ್ರಕರಣವನ್ನು ಪೊಲೀಸರು ಪ್ರಾಥಮಿಕ ತನಿಖೆಯಿಂದ ಕಂಡುಕೊಂಡಿದ್ದಾರೆ.

ವಣ್ಣೂರು ಗ್ರಾಮದ ಮಹೇಶ ಗೂಳನ್ನವರ ಮತ್ತು ಪಕ್ಕದ ಗ್ರಾಮದ ಯಲ್ಲಪ್ಪನಿಗೆ ಕೊಲೆ ಮಾಡಲು ನಿಂಗಪ್ಪನ ಪತ್ನಿ ನೀಲಮ್ಮ ಸುಪಾರಿ ಕೊಟ್ಟಿದ್ದಳು.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ನೇಸರಗಿ ಸಿಪಿಐ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕೊಲೆಯಾದ 24 ಗಂಟೆಯಲ್ಲಿ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ‌.

Share This Article