ವಿಶ್ವಕಪ್ ಸೋತ ನಂತರ ಫ್ರಾನ್ಸನಲ್ಲಿ ಭುಗಿಲೆದ್ದ ಹಿಂಸಾಚಾರ

khushihost
ವಿಶ್ವಕಪ್ ಸೋತ ನಂತರ ಫ್ರಾನ್ಸನಲ್ಲಿ ಭುಗಿಲೆದ್ದ ಹಿಂಸಾಚಾರ

ಪ್ಯಾರಿಸ, ೧೯- ಫಿಫಾ ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಅರ್ಜೆಂಟಿನಾ ವಿರುದ್ಧ ಸೋತ ಫ್ರಾನ್ಸನಲ್ಲಿ ಭಾರೀ ಗಲಭೆ ಎದ್ದು ಹಿಂಸಾಚಾರ ನಡೆಯಿತು.

ರವಿವಾರ ನಡೆದ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವು ಫ್ರಾನ್ಸ ಪೆನಾಲ್ಟಿ ಶೂಟೌಟನಲ್ಲಿ  4-2 ರಿಂದ ಗೆಲುವು ಸಾಧಿಸಿದ ನಂತರ ಫ್ರಾನ್ಸ್ ನಲ್ಲಿ ಗಲಭೆಗಳು ಭುಗಿಲೆದ್ದವು. ಸಾವಿರಾರು ಜನರು ಬೀದಿಗಿಳಿದು ಆಕ್ರೋಶ ಹೊರಹಾಕಿದರು. ಫ್ರಾನ್ಸ ರಾಜಧಾನಿಯ ಬೀದಿಗಳಲ್ಲಿ ಸಾವಿರಾರು ಪೊಲೀಸರು ಗಸ್ತು ತಿರುಗುತ್ತಿರುವುದು ಕಂಡುಬಂದಿದೆ.

ಪ್ಯಾರಿಸ್‌ನ ಚಾಂಪ್ಸ್-ಎಲಿಸೀಸ್‌ನಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿದರು. ಫ್ರಾನ್ಸ ಅಭಿಮಾನಿಗಳನ್ನು ಪೊಲೀಸರು ಚದುರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Share This Article