ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ : ರಸ್ತೆ ಮೇಲೆ ಎಚ್ಚರಿಕೆ ಸಂದೇಶ

khushihost
ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ : ರಸ್ತೆ ಮೇಲೆ ಎಚ್ಚರಿಕೆ ಸಂದೇಶ

ಮಂಗಳೂರು : ದೇಶಾದ್ಯಂತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧದ ಬೆನ್ನಲ್ಲೇ ಜಿಲ್ಲೆಯ ಬಂಟ್ವಾಳದಲ್ಲಿ ಕಿಡಿಗೇಡಿಗಳು ರಸ್ತೆ ಮೇಲೆ ಆರ್ ಎಸ್‌ಎಸ್ ಗೆ ಎಚ್ಚರಿಕೆ ಸಂದೇಶ ಬರೆದಿರುವ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ರಸ್ತೆ ಮೇಲೆ ಬರಹ ಬರೆದು ಆರ್ ಎಸ್ ಎಸ್ ಗೆ ಎಚ್ಚರಿಕೆ ನೀಡಿದ್ದಾರೆ. ಚಡ್ಡಿಗಳೇ ಎಚ್ಚರ, ಪಿಎಫ್ ಐ ನಾವು ಮರಳಿ ಬರುತ್ತೇವೆ ಎಂದು ಬರೆದು ಪರಾರಿಯಾಗಿದ್ದಾರೆ.

ಈ ಕುರಿತು ಸ್ಥಳೀಯರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Share This Article