ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ದಮ್‌ ಇದ್ರೆ ತಡೆಯಿರಿ

khushihost
ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ದಮ್‌ ಇದ್ರೆ ತಡೆಯಿರಿ

ಬೆಂಗಳೂರು: ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶವನ್ನು ಮಾಡುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತ ಕಾಂಗ್ರೆಸ್‌ ವಿರುದ್ದ ಕಿಡಿಕಾರಿದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ನಾವೇ ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ದಮ್‌ ಇದ್ರೆ ತಡೆಯಿರಿ ಅಂತ ಕಾಂಗ್ರೆಸ್‌ಗೆ ಸವಾಲ್‌ ಹಾಕಿದರು.

ನಿಮ್ಮಪ್ಪರಾಣೆ ಸಿಎಂ ಆಗೋಲ್ಲ ಅಂತ ಹೇಳಿದವರ ಜೊತೆಗೆ ನೀವು ಕೈ ಜೋಡಿಸಿದ್ದು ನೆನಪು ಮಾಡಿಕೊಳ್ಳಿ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದರು.

ಜನಸ್ಪಂದನ ಕಾರ್ಯಕ್ರಮವನ್ನು ಕರ್ನಾಟಕದ ತುಂಬೆಲ್ಲ ಮಾಡುತ್ತೇವೆ. ತಾಕತ್ತು ಇದ್ದರೇ ದಮ್‌ ಇದ್ರೆ ತಡೆಯಿರಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದರು. ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತೇವೆ ಅಂತ ಹೇಳಿದರು.

 

Share This Article