ಇಬ್ಬರು ಮಕ್ಕಳೊಂದಿಗೆ ಜಲಾಶಯಕ್ಕೆ ಬಿದ್ದು ಮಹಿಳೆಯ ಆತ್ಮಹತ್ಯೆ

khushihost
ಇಬ್ಬರು ಮಕ್ಕಳೊಂದಿಗೆ ಜಲಾಶಯಕ್ಕೆ ಬಿದ್ದು ಮಹಿಳೆಯ ಆತ್ಮಹತ್ಯೆ

ಸವದತ್ತಿ : ಕೌಟುಂಬಿಕ ಸಮಸ್ಯೆಗಳಿಗೆ ಬೇಸತ್ತು ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮದುರ್ಗ ತಾಲೂಕಿನ ಚುಂಚನನೂರು ಗ್ರಾಮದ 32 ವರುಷದ ಶಶಿಕಲಾ ಅಲಿಯಾಸ್ ತನುಜಾ ಪರಸಪ್ಪ ಗೋಡಿ ತಮ್ಮ ಮಕ್ಕಳಾದ 4 ವರುಷದ ಸುದೀಪ ಮತ್ತು 3 ವರುಷದ ರಾಧಿಕಾರೊಂದಿಗೆ ಜಲಾಶಯ ನೀರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಮೂವರ ಶವಗಳೂ ಜಲಾಶಯದ ಹಿನ್ನೀರು ಪ್ರದೇಶವಾದ ಒಟ್ನಾಳ ಗ್ರಾಮದ ಬಳಿ ಪತ್ತೆಯಾಗಿವೆ.

ಸವದತ್ತಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article