140 ಸ್ಥಾನ ಗೆಲ್ಲುವ ಸಂಕಲ್ಪ : ಯಡಿಯೂರಪ್ಪ 

khushihost
140 ಸ್ಥಾನ ಗೆಲ್ಲುವ ಸಂಕಲ್ಪ : ಯಡಿಯೂರಪ್ಪ 

ಶಿವಮೊಗ್ಗ ; ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲುವ ಸಂಕಲ್ಪ ಹೊಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರವಯುತವಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ರಾಜ್ಯಕ್ಕೆ ಆಹ್ವಾನ ನೀಡಿದಾಗ ಬರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಅಧಿಕಾರಕ್ಕೆ ತರುತ್ತೇವೆ. ಮೋದಿ ನೇತೃತ್ವದ ಕೋರ್ ಕಮಿಟಿ ಸಭೆಯಲ್ಲೂ ಇದೇ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂದು ಮೋದಿ ಅವರು ಹೇಳಿದ್ದಾರೆ. ನಾವು ಸಹ ಮೋದಿಗೆ ಭರವಸೆ ನೀಡಿದ್ದೇವೆ. ರಾಜ್ಯಕ್ಕೆ ಮೋದಿ ಬಂದು ಹೋದ ಮೇಲೆ ಉತ್ಸಾಹ ಬಂದಿದೆ ಎಂದರು.

Share This Article