ಯಡಿಯೂರಪ್ಪ ಸ್ಥಿತಿ ತಬ್ಬಲಿ ನೀನಾದೆ ಮಗನೆ ಎನ್ನುವ ರೀತಿ ಆಗಿದೆ : ಸಿಎಂ ಇಬ್ರಾಹಿಂ 

khushihost
ಯಡಿಯೂರಪ್ಪ ಸ್ಥಿತಿ ತಬ್ಬಲಿ ನೀನಾದೆ ಮಗನೆ ಎನ್ನುವ ರೀತಿ ಆಗಿದೆ : ಸಿಎಂ ಇಬ್ರಾಹಿಂ 

ಹುಬ್ಬಳ್ಳಿ : 90ರ ದಶಕದಲ್ಲಿದ್ದ ಜನತಾ ದಳವನ್ನು ನಾವು ಪುನಃ ಸ್ಥಾಪನೆ ಮಾಡುತ್ತೇವೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಯತ್ನಗಳು ನಡೆದಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆ ಭಾರಿ ಜೋರಾಗಿ ನಡೆಯುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಪಂಚರತ್ನ ಜೋರಾಗಿದೆ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಸಿದ್ದರಾಮಯ್ಯಗೆ ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ, ಇನ್ನು ಯಡಿಯೂರಪ್ಪ ಸ್ಥಿತಿ ತಬ್ಬಲಿ ನೀನಾದೆ ಮಗನೆ ಎನ್ನುವ ರೀತಿ ಆಗಿದೆ ಎಂದರು. ಸಿದ್ದರಾಮಯಯ್ಯ ಮೇಲೆ ನನಗೆ ಗೌರವ ಇದೆ. ನಾನು ಅವರಿಗೆ ವರುಣಾದಿಂದ ಸ್ಪರ್ಧೆ ಮಾಡಲಿ ಎಂದು ಹೇಳುತ್ತೇನೆ. ಒಂದು ವೇಳೆ ಕೋಲಾರಕ್ಕೆ ಹೋದರೆ ಅವರನ್ನು ಬಿಸ್ಮಿಲ್ಲಾ ಮಾಡುತ್ತಾರೆ ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.

Share This Article