ಆನ್ ಲೈನ್ ಬೆಟ್ಟಿಂಗ್ ವಿಚಾರಣೆಗೆ ಹಾಜರಾದ ಯುವರಾಜ ಸಿಂಗ್

khushihost
ಆನ್ ಲೈನ್ ಬೆಟ್ಟಿಂಗ್ ವಿಚಾರಣೆಗೆ ಹಾಜರಾದ ಯುವರಾಜ ಸಿಂಗ್

ನವದೆಹಲಿ: ಕಾನೂನುಬಾಹಿರ ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌

ಹಾಗೂ ಜೂಜಾಟಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಮಂಗಳವಾರ ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣ ಸಂಬಂಧ ಯುವರಾಜ್ ಸಿಂಗ್ ಅವರು ತಮ್ಮ ವಕೀಲರೊಂದಿಗೆ ದೆಹಲಿಯ ಇ.ಡಿ ಕೇಂದ್ರ ಕಚೇರಿಗೆ 2 ಗಂಟೆ ತಡವಾಗಿ ಬಂದಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ. ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಇ.ಡಿ ಅಧಿಕಾರಿಗಳು ಈಚೆಗೆ ಕ್ರಿಕೆಟಿಗರಾದ ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್ ಹಾಗೂ ಬಾಲಿವುಡ್ ನಟ ಸೋನು ಸೂದ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದರು. ಅದರಂತೆ ಉತ್ತಪ್ಪ ಅವರು ಸೋಮವಾರ ಇ.ಡಿ ವಿಚಾರಣೆಗೆ ಹಾಜರಾಗಿದ್ದರು. ಬುಧವಾರ (ಸೆ. 24ರಂದು) ನಟ ಸೋನು ಸೂದ್ ಅವರನ್ನು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಪ್ರಕರಣ ಸಂಬಂಧ ಇ.ಡಿ.ಯು ಈಗಾಗಲೇ ಕ್ರಿಕೆಟಿಗರಾದ ಸುರೇಶ್ ರೈನಾ, ಶಿಖರ್ ಧವನ್, ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ಬಂಗಾಳಿ ನಟ ಅಂಕುಶ್‌ ಹಜ್ರಾ ಅವರ ವಿಚಾರಣೆ ನಡೆಸಿದೆ.

Share This Article